ಕಪಿಟ್ ಜಾ, ಪೀಟರ್ : 1894-1984. ಸೋವಿಯತ್ ರಷ್ಯದ ಭೌತವಿe್ಞÁನಿ. ಸೋವಿಯತ್ ರಷ್ಯದ ಕೋನ್ಸ್ಟಾಟ್ ನಗರದಲ್ಲಿ 26 ಜೂನ್ 1894ರಂದು ಹುಟ್ಟಿದ. ಇವನ ತಂದೆ ಮತ್ತು ತಾತ ಇಬ್ಬರೂ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದವರು. ಲೆನಿನ್ಗ್ರಾಡ್ (ಹಿಂದೆ ಪೆಟ್ರೋಗ್ರಾಡ್ ಎಂಬ ಹೆಸರಿದ್ದ) ನಗರದಲ್ಲಿರುವ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 1919ರಲ್ಲಿ ಪದವಿ ಪಡೆದು, ಅಲ್ಲಿಯೇ 1921ರ ವರೆಗೆ ಅಧ್ಯಾಪಕನಾಗಿದ್ದ. ಅನಂತರ ಇಂಗ್ಲೆಂಡಿನಲ್ಲಿರುವ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಕ್ಯಾವೆಂಡಿಷ್ ಪ್ರಯೋಗಶಾಲೆಯಲ್ಲಿ ಲಾರ್ಡ್ ರುದಡ್ ಫೋರ್ಡನೊಂದಿಗೆ ಸಂಶೋಧನೆ ನಡೆಸಿದ. 1924ರಲ್ಲಿ ಅದೇ ಪ್ರಯೋಗಶಾಲೆಯಲ್ಲಿ ಕಾಂತತೆಯ ಪ್ರಯೋಗಶಾಲೆಗೆ ಸಹಾಯಕ ನಿರ್ವಾಹಕನಾಗಿ ನೇಮಕಗೊಂಡ 1929ರಲ್ಲಿ ರಾಯಲ್ ಸೊಸೈಟಿಗೆ ಚುನಾಯಿತನಾದ. 200ವರ್ಷಗಳಲ್ಲಿ ಇದಕ್ಕೆ ಸದಸ್ಯರಾದ ಪರಕೀಯರಲ್ಲಿ ಈತನೇ ಮೊದಲನೆಯವ. ಅನಂತರ ಅದೇ ಸೊಸೈಟಿಯ ಮೆಸ್ಸೆಲ್ ಪ್ರಾಧ್ಯಾಪಕನಾದಾಗ ಸೊಸೈಟಿ ಈತನಿಗೋಸ್ಕರವೇ ಮಾಂಡ್ ಪ್ರಯೋಗಶಾಲೆಯನ್ನು ಕಟ್ಟಿಸಿತು (1933).
ಯಾವಾಗಲೂ ಹೋಗುವಂತೆ 1934ರಲ್ಲೂ ಕೆಪಿಟ್ಜಾ ತನ್ನ ಉದ್ಯೋಗಕ್ಕೆ ಸಂಬಂಧಪಟ್ಟ ಸಭೆಗೆಂದು ಸೋವಿಯತ್ ರಷ್ಯಕ್ಕೆ ಹೋದ; ಆದರೆ ಮತ್ತೆ ಅಲ್ಲಿಂದ ಆತ ವಾಪಸ್ಸು ಬರಲಿಲ್ಲ. 1935ರಲ್ಲಿ ಮಾಂಡ್ ಪ್ರಯೋಗಶಾಲೆಯನ್ನು ಸೋವಿಯತ್ ಸರ್ಕಾರ ಅಸಲುಬೆಲೆಗೆ ಕೊಂಡುಕೊಂಡು ಮಾಸ್ಕೊ ನಗರದ ವಿe್ಞÁನ ಅಕಾಡೆಮಿಯ ಭೌತವಿಜ್ಞಾನ ಸಮಸ್ಯೆಗಳ ಇನ್ಸ್ಟಿಟ್ಯೂಟಿಗೆ ವರ್ಗ ಮಾಡಿತು. ಅಲ್ಲಿ ಕಪಿಟ್eóÁ ಅದರ ಕಾರ್ಯ ನಿರ್ವಾಹಕನಾದ. ಅಲ್ಲದೆ ಆತನಿಗೆ ಮಿತಿಯಿಲ್ಲದಷ್ಟು ಅನುಕೂಲತೆಗಳೂ ದೊರೆತವು.

ಕೆಳ ಉಷ್ಣತಾ ಭೌತವಿಜ್ಞಾನ ಮತ್ತು ಕಾಂತತೆಗಳ ಮೇಲೆ ಕಪಿಟ್ಜಾ ಬಹಳ ಸಂಶೋಧನೆಗಳನ್ನು ನಡೆಸಿದ್ದಾನೆ. ಈತ ಹೀಲಿಯಂ ಅನಿಲವನ್ನು ಹೊಸ ರೀತಿಯಲ್ಲಿ ದ್ರವೀಕರಣ ಮಾಡುವುದನ್ನು ಆವಿಷ್ಕರಿಸಿದ (ನೋಡಿ- ಅನಿಲ-ದ್ರವೀಕರಣ). ಗಾಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಕಡಿಮೆ ಬೆಲೆಯಲ್ಲಿ ದ್ರವೀಕರಿಸು ತಿರುಬಾನಿಯನ್ನು ಕಂಡುಹಿಡಿದ. ಆಕ್ಸಿಜನ್ ದ್ರವೀಕರಣದ ಸಂಬಂಧವಾಗಿ ಈತ ಮಾಡಿದ ಸಂಶೋಧನೆಗಳಿಂದ ಕೈಗಾರಿಕೆಗಳ ಬೆಳೆವಣಿಗೆಗೆ, ಅದರಲ್ಲೂ ಸೋವಿಯತ್ ರಷ್ಯದ ಉಕ್ಕು ತಯಾರಿಕೆಗೆ ಬಹಳ ಅನುಕೂಲವಾಯಿತು. ಸೋವಿಯತ್ ದೇಶದ ಪರಮಾಣು ಮತ್ತು ಹೈಡ್ರೊಜನ್ ಬಾಂಬುಗಳ ತಯಾರಿಕೆಯಲ್ಲಿ ಈತನ ಪಾತ್ರ ಬಲು ದೊಡ್ಡದೆಂದು ಹಲವರು ಅಭಿಪ್ರಾಯ ಪಡುತ್ತಾರೆ. ಪ್ಲಾಸ್ಮ ಭೌತವಿಜ್ಞಾನದಲ್ಲಿಯೂ ಕಪಿಟ್eóÁ ಸಂಶೋಧನೆಗಳನ್ನು ನಡೆಸಿದ್ದಾನೆ. ಸೋವಿಯತ್ ರಷ್ಯದಲ್ಲಿ 1955ರಂದು ಸ್ಥಾಪಿಸಲ್ಪಟ್ಟ ಅಂತರಗ್ರಹ ಮಂಡಲಿಗೆ ಈತ ಮುಖ್ಯಸ್ಥನಾಗಿದ್ದ. 1957ರಲ್ಲಿ ಉಡಾಯಿಸಿದ ಎರಡು ಕೃತಕ ಉಪಗ್ರಹಗಳಿಗೆ ಈತನೇ ಹೆಚ್ಚು ಕಾರಣ ಎಂದು ನಂಬಿಕೆ.
ಕಪಿಟ್eóÁನಿಗೆ ಹಲವಾರು ಗೌರವ ಪದವಿಗಳು ಬಂದಿದೆ. 1946ರಲ್ಲಿ ಈತ ವಿಜ್ಞಾನದ ರಾಷ್ಟ್ರೀಯ ಅಕಡೆಮಿಯ ಸದಸ್ಯನಾಗಿ ಚುನಾಯಿತನಾದ. ಸೋವಿಯತ್ ಸರ್ಕಾರದಿಂದ ಈತನಿಗೆ ಸ್ಟಾಲಿನ್ ಪ್ರಶಸ್ತಿ, ಆರ್ಡರ್ ಆಫ್ ಲೆನಿನ್ ಪ್ರಶಸ್ತಿ ಮತ್ತು ಇತರ ಬಹುಮಾನಗಳು ಬಂದಿವೆ. ಕಾಂತತೆ ಮತ್ತು ಅತಿಶೈತೃ ಭೌತವಿಜ್ಞಾನ ಕ್ಷೇತ್ರಗಳಲ್ಲಿ ನಡೆಸಿದ ಸಂಶೋಧÀನೆಗಳಿಗಾಗಿ 1978ರಲ್ಲಿ ಭೌತವಿಜ್ಞಾನದ ನೊಬೆಲ್ ಪಾರಿತೋಷಕವನ್ನು ಕಪಿಟ್ಜಾ ಪಡೆದನು. ವೈಜ್ಞಾನಿಕ ಸಂಶೋಧನೆಗಳು ವಿನಾಶಕಾರಿ ಉದ್ದೇಶಗಳ ಬದಲು ರಚನಾತ್ಮಕ ಉದ್ದೇಶಗಳಿಗೆ ಒದಗಬೇಕೆಂದು ಆಶಿಸಿದ ಕಪಿಟ್ಜಾ ಆ ದಿಸೆಯಲ್ಲಿ ದುಡಿದ.     (ಎನ್.ಜಿ.ಪಿ.,ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ